Tuesday, April 21, 2020

ತಾಳೆಯೋಲೆ

ಕೋವಿಡ್ ಕಾಲದ ಚರಿತ್ರೆ ಸಂಚಿಕೆ




ವಿಶ್ವದಾದ್ಯಂತ ಭಯಭೀತಿಯನ್ನು ಸೃಷ್ಟಿಸಿ ಅಸಂಖ್ಯಾತ ಜನರ ಪ್ರಾಣವನ್ನು ಬಲಿತೆಗೆದುಕೊಂಡ ಕೋವಿಡ್ - 19 ಈ ಪುಟ್ಟ ಕೇರಳದಲ್ಲೂ ತನ್ನ ಕರಾಳ ಹಸ್ತವನ್ನು ಚಾಚಿದೆ.

ಈ ವೈರಸಿನ ತಾಂಡವವು ಜನಜೀವನದ ಮೇಲೆ ಗಾಢವಾದ ಪರಿಣಾಮ ಬೀರಿದೆ.ಭಾರತದ ಇತರ ರಾಜ್ಯಗಳಿಗಿಂತ ಭಿನ್ನವಾದ ರೀತಿಯಲ್ಲಿ ಕೇರಳ ಸರಕಾರವು ಆರೋಗ್ಯ ಕ್ಷೇತ್ರದಲ್ಲಿ ಜಾರಿಗೊಳಿಸುತ್ತಿರುವ ಫಲಪ್ರದವಾದ ಮುಂಜಾಗ್ರತಾ ಕ್ರಮಗಳು , ಪ್ರಾದೇಶಿಕ ಆಡಳಿತ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಮಾಡುತ್ತಿರುವ ಕಾರ್ಯಚಟುವಟಿಕೆಗಳು ಈ ಲೋಕ್ ಡೌನ್ ಸಮಯದಲ್ಲಿಯೂ ಇಡೀ ದೇಶಕ್ಕೆ ಮಾದರಿಯಾಗಿವೆ.ಕೇರಳಕ್ಕೆ ಕೋವಿಡ್-19 ಪ್ರತಿರೋಧ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಯಿತಲ್ಲದೆ

ರೋಗ ವ್ಯಾಪನವನ್ನು ಫಲಪ್ರದವಾಗಿ ತಡೆಗಟ್ಟಲು ಮತ್ತು ರೋಗಮುಕ್ತಿ ಹೊಂದಿದವರ ಸಂಖ್ಯೆಯನ್ನು ಹೆಚ್ಚಿಸಲು ನಮಗೆ ಸಾಧ್ಯವಾಗಿದೆ. ಅಭೂತಪೂರ್ವವಾದ ಈ ವೈರಸಿನ ವ್ಯಾಪನವನ್ನು ತಡೆಯುವಲ್ಲಿ ಆರೋಗ್ಯ ಇಲಾಖೆ ಮತ್ತು ಇತರ ಅಗತ್ಯ ಸೇವಾವಿಭಾಗಗಳ ಜೊತೆಯಲ್ಲಿ ಪಂಚಾಯತ್ ಇಲಾಖೆಯೂ ಮುಂಚೂಣಿಯಲ್ಲಿದೆ. ಸಾಮಾನ್ಯ

ಜನರೊಂದಿಗೆ ಬೆರೆತುಕೊಂಡು ಕಾರ್ಯಾಚರಿಸುತ್ತಿರುವ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಜನಜೀವನದ ಸ್ಪಂದನವನ್ನು ಅತ್ಯಂತ ಚೆನ್ನಾಗಿ ತಿಳಿಯಲು ಸಾಧ್ಯ. ನಮ್ಮ ತಲೆಮಾರಿಗೆ ಕೇಳಿಯೂ ಗೊತ್ತಿಲ್ಲದ ರೀತಿಯಲ್ಲಿ ಸಾಮಾನ್ಯ ಜನರೆಲ್ಲರೂ ಅವರವರ ಸ್ಥಳಗಳಲ್ಲಿಯೇ ನಿಲ್ಲಬೇಕಾಗಿ ಬಂದ ಈ ಲೋಕ್ ಡೌನ್ ಸಮಯದಲ್ಲಿ , ಕೋವಿಡ್-19 ಪ್ರತಿರೋಧ ಚಟುವಟಿಕೆಗಳಲ್ಲಿ ಜನರು ಹೇಗೆ ಸಹಕರಿಸಿದರೆಂದೂ ದೇಶದೊಂದಿಗೆ ಕೈಜೋಡಿಸಿದರೆಂದೂ ಹೇಗೆ ಕೋವಿಡ್-19 ಪ್ರತಿರೋಧ ಲೋಕ್ ಡೌನ್ ಸಮಯವನ್ನು ಸೃಜನಾತ್ಮಕವಾಗಿ ಬಳಸಿದರೆಂದೂ ಪಂಚಾಯತುಗಳು ಯಾವ ರೀತಿಯ ಮಾದರಿ ಚಟುವಟಿಕೆಗಳನ್ನು ಕಾಸರಗೋಡು ಜಿಲ್ಲೆಗೆ ಮತ್ತು ಕೇರಳಕ್ಕೆ ನೀಡಿವೆಯೆಂದೂ ಈ ಚಟುವಟಿಕೆಗಳಲ್ಲಿ ನಮ್ಮ ಸಾಮಾನ್ಯ ಜನತೆ ಯಾವ ರೀತಿಯಲ್ಲಿ ಭಾಗವಹಿಸಿದರೆಂದೂ ಗುರುತಿಸಬೇಕಾದುದು ಅತ್ಯಗತ್ಯವಾಗಿದೆ.

ಈ ರೀತಿಯಲ್ಲಿರುವ ಮಾಹಿತಿಗಳನ್ನು ಸಂಗ್ರಹಿಸಿ , ಅವುಗಳನ್ನು ದಾಖಲಿಸಿ , ಭವಿಷ್ಯದಲ್ಲಿ ಚರಿತ್ರೆದಾಖಲೆಯಾಗಿ ಇಟ್ಟುಕೊಳ್ಳುವ ಉದ್ದೇಶದಿಂದ ಕಾಸರಗೋಡು ಪಂಚಾಯತು ಉಪನಿರ್ದೇಶಕರ ಕಛೇರಿಯ ನೇತೃತ್ವದಲ್ಲಿ - ‘ತಾಳೆಯೋಲೆ ’(ಕೋವಿಡ್ ಕಾಲದ ಚರಿತ್ರೆ ಸಂಚಿಕೆ)ಯನ್ನು ತಯಾರಿಸಲಾಗುತ್ತಿದೆ.

ಕೇರಳದ ಇತರ ಜಿಲ್ಲೆಗಳ ಪಂಚಾಯತುಗಳಿಗೆ ಮಾದರಿಯಾಗಿ ಕಾಸರಗೋಡು ಜಿಲ್ಲೆ ತಯಾರಿಸುವ ‘ತಾಳೆಯೋಲೆ ’ ಯಲ್ಲಿ ಜಿಲ್ಲೆಯ 38 ಪಂಚಾಯತುಗಳ ಸಹಭಾಗಿತ್ವವಿರುತ್ತದೆ.

‘ತಾಳೆಯೋಲೆ ’ ಯಲ್ಲಿ ಲೇಖನ,ಕಥೆ,ಕವನಗಳನ್ನು ಸೇರಿಸಲು ಉದ್ದೇಶಿಸಲಾಗಿದೆ. ಲೇಖನವು ಕೋವಿಡ್-19 ಪ್ರತಿರೋಧ ಚಟುವಟಿಕೆಗಳಿಗೆ ಸಂಬಂಧಿಸಿದ್ದಾಗಿರಬೇಕು.ಕಥೆ,ಕವನಗಳಿಗೆ ಇಷ್ಟವಿರುವ ವಿಷಯವನ್ನು ಆಯ್ದುಕೊಳ್ಳಬಹುದು.

38 ಪಂಚಾಯತುಗಳ ಜನಸಾಮಾನ್ಯರು ,ಜನಪ್ರತಿನಿಧಿಗಳು , ಎಲ್ಲ ಸಂಸ್ಥಗಳ ನೌಕರರು ತಮ್ಮ ರಚನೆಗಳನ್ನು ಕಳುಹಿಸಬಹುದು.ರಚನೆಗಳು ಮಲಯಾಳ,ಕನ್ನಡ,ತುಳು ಭಾಷೆಗಳಲ್ಲಿರಬಹುದು.ರಚನೆಯೊಂದಿಗೆ ಬರೆದವರ ಹೆಸರು,ವಯಸ್ಸು,ಪೂರ್ಣ ವಿಳಾಸ ,ಪಂಚಾಯತು ಮತ್ತು ಒಂದು ಭಾವಚಿತ್ರ ಇರಬೇಕು. ತಮ್ಮ ರಚನೆಗಳನ್ನುsureshbeen@gmail.com" ಎಂಬ ಇ ಮೈಲ್ ವಿಳಾಸಕ್ಕೆ ಕಳುಹಿಸಬಹುದು ಅಥವಾ ತಮ್ಮ ಪಂಚಾಯತು ಕಛೇರಿಯಲ್ಲಿ ನೀಡಬಹುದು.ರಚನೆಗಳು 2020 ಮೇ 3 ರ ಮುಂಚಿತವಾಗಿ ಲಭಸಿರಬೇಕು.

ರಚನೆಗಳ ಆಯ್ಕೆ ಮತ್ತು ಪರಿಷ್ಕರಣೆಯ ಅಧಿಕಾರ ಕಾಸರಗೋಡು ಪಂಚಾಯತು ಉಪನಿರ್ದೇಶಕರದ್ದಾಗಿರುತ್ತದೆ.

ರಚನೆಗಳು ದೇಶವಿರೋಧಿ , ಸರಕಾರದ ಧೋರಣೆಗಳು ಮತ್ತು ಚಟುವಟಿಕೆಗಳನ್ನು ವಿಮಶಿ೯ಸುವ ಹಾಗೂ ಜಾತಿವಿಮ,ಮತ ಸಂಘರ್ಷಗಳನ್ನುಂಟುಮಾಡುವ ಅಂಶಗಳನ್ನು ಹೊಂದಿರಬಾರದು.ಇಂತಹ ರಚನೆಗಳನ್ನು ಯಾವುದೇ ಸೂಚನೆಗಳನ್ನು ನೀಡದೆ ತಿರಸ್ಕರಿಸಲಾಗುವುದು.

 ‘ತಾಳೆಯೋಲೆ ’ ಯ ಚಟುವಟಿಕೆಗಳಿಗೆ ಸಂಬಂಧಿಸಿ ಕಾಸರಗೋಡು ಪಂಚಾಯತು ಉಪನಿರ್ದೇಶಕರ ತೀರ್ಮಾನವೇ ಅಂತಿಮವಾಗಿರುತ್ತದೆ.

No comments:

Post a Comment