Monday, May 4, 2020

ಪಂಚಾಯತ್ ವರದಿ

ಕೆ ಹರೀಶ್
ಕೋವಿಡ್ ನ ದಿನಗಳಲ್ಲಿ................

2019 ನವಂಬರ್ ತಿಂಗಳಲ್ಲಿ ದೂರದ ಚೀನಾದ ಹೂಹನ್ ಪ್ರಾಂತ್ಯದಲ್ಲಿ ವಕ್ಕರಿಸಿದ ‘ಕೋವಿಡ್ -19’ಎಂಬ ವೈರಸ್ ಕೆಲವೇ ದಿನಗಳಲ್ಲಿ ತನ್ನ ಕದಂಬ ವಾಹುಗಳನ್ನು ವಿಶ್ವದ ಮೂಲೆ ಮೂಲೆಗೆ ವ್ಯಾಪಿಸಿತು.ದೂರದರ್ಶನದಲ್ಲಿ ಕಾಣಿಸುತ್ತಿರುವ ಚೀನಾದ ರೋಗಿಗಳ ದೃಶ್ಯಗಳನ್ನು ನೋಡಿದಾಗ ಬೇಸರ ಎಣಿಸಿದರೂ,ಅವರು ಮುಖಕ್ಕೆ ಕಟ್ಟಿದ ಮಾಸ್ಕ್, ವೈದ್ಯರುಗಳ ವೇಷಭೂಷಣಗಳನ್ನು ನೋಡಿದಾಗ ವಿಚಿತ್ರವಾಗಿ ಕಂಡರೂ, ಸಧ್ಯಕ್ಕೆ ನಮಗೆ ಆ ತೊಂದರೆ ಇಲ್ವಲ್ಲ,ಅಷ್ಟೇ ಸಾಕು, ಎಂದು ಬಾವಿಸುತ್ತಿದೆ.

 ಜನವರಿ ತಿಂಗಳಲ್ಲಿ ಕೇರಳದಲ್ಲಿ ಈ ವೈರಸ್ ನ ಹೆಜ್ಜೆ ಗುರುತು ಕಂಡಾಗ ಏನೋ ಅಪಾಯದ ಸೂಚನೆ ಮನಸ್ಸಿಗೆ ಬಂತು.ಆದರೆ ಕೇರಳ ರಾಜ್ಯದ ಅತ್ಯುತ್ತಮ ಆರೋಗ್ಯ ನೀತಿಯಿಂದ ಈ ಮಾರಿ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ ಎಂದು ಭಾವಿಸಿದ್ದೆ.

‘ಕೋವಿಡ್ -19’ ಎಂಬ ವೈರಸ್ ನ ಪ್ರಭಾವ ದಿನೇ ದಿನೇ ಹೆಚ್ಚಾಗಿ 1/4/2020 ಕ್ಕೆ ನಮ್ಮ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 265ಕ್ಕೆ ತಲಪಿತ್ತು.ನಮ್ಮ ಜಿಲ್ಲೆಯಾದ ಕಾಸರಗೋಡಿನಲ್ಲಿ ಈ ವೈರಸ್ ನ ಸೋಂಕು ಶರವೇಗದಲ್ಲಿ ಹರಡ ತೊಡಗಿತು. ಎಲ್ಲಾ ಜಿಲ್ಲೆಗಳಲ್ಲಿ ಕೋವಿಡ್ ನ ಪ್ರತಿರೋಧ ಪ್ರವರ್ತನದ ಅವಲೋಕನ ನಡೆದಂತೆ ನಮ್ಮ ಜಿಲ್ಲೆಯಲ್ಲಿಯೂ ಸನ್ಮಾನ್ಯ ರೆವೆನ್ಯೂ ಮಂತ್ರಿ ಶ್ರೀ ಚಂದ್ರಶೇಖರ್ ರವರ ಅಧ್ಯಕ್ಷತೆಯಲ್ಲಿ ,ವಿವಿಧ ಜನ ಪ್ರತಿನಿಧಿಗಳ,ಜಿಲ್ಲಾ ಮಟ್ಟದ ಎಲ್ಲಾ ಇಲಾಖಾ ಅಧಿಕಾರಿಗಳ ಸಭೆ ನಡೆಯಿತು.ಸಭೆಯಲ್ಲಿ ‘ಕೋವಿಡ್ -19’ ಪ್ರತಿರೋಧ ಪ್ರವರ್ತನದ ರೂಪುರೇಖೆಗಳನ್ನು ತಯಾರಿಸಿ ಅದನ್ನು ನಿರ್ವಹಿಸಲು ಅಧಿಕಾರಿಗಳಿಗೆ ನಿರ್ಧೇಶಿಸಲಾಯಿತು.

ಇದೇ ಸಂದರ್ಭದಲ್ಲಿ ಪಂಚಾಯತು ಕಾರ್ಯದರ್ಶಿಗಳನ್ನು ಕೋವಿಡ್ -19 ಪ್ರತಿರೋಧ ಪ್ರವರ್ತನದ ಏಕೋಪನಕ್ಕಾಗಿ ಪಂಚಾಯತು ಮಟ್ಟದ ನೋಡಲ್ ಆಫೀಸರ್ ಆಗಿ ಪಂಚಾಯತು ನಿರ್ದೇಶಕರು ನೇಮಿಸುವುದರೊಂದಿಗೆ ಪಂಚಾಯತು ಮಟ್ಟದ ‘ಕೋವಿಡ್ -19’ ವೈರಸ್ ನ ಎದುರಿನ ಯುದ್ಧದಲ್ಲಿ ನಾನೂ ಒಬ್ಬ ಸೈನಿಕನಾಗಿ ಬದಲಾದೆ.

 ಕೋವಿಡ್ -19 ವೈರಸ್ ನ ಪ್ರತಿರೋಧ ಪ್ರವರ್ತನದ ಭಾಗವಾಗಿ ಕೇಂದ್ರ ರಾಜ್ಯ ಸರಕಾರದ ನಿರ್ದೇಶನಗಳು ಹಾಗೂ ಆರೋಗ್ಯ ಇಲಾಖೆ ಮತ್ತು ಪಂಚಾಯತು ಇಲಾಖಾ ನಿರ್ದೇಶನಗಳನ್ನು ಪಂಚಾಯತು ಮಟ್ಟದಲ್ಲಿ , ಜನ ಪ್ರತಿನಿಧಿಗಳ, ರಾಜಕೀಯ ಪಕ್ಷದ ಪ್ರತಿನಿಧಿಗಳ,ವಿವಿಧ ಯುವ ಜನ ಸಂಘದ ಪ್ರತಿನಿಧಿಗಳ ಮತ್ತು ಸರಕಾರಿ ಇಲಾಖೆಗಳ ಸಹಾಯದೊಂದಿಗೆ ಕಾರ್ಯಗತಗೊಳಿಸುವುದು ಪಂಚಾಯತು ಕಾರ್ಯದರ್ಶಿಯ ಪ್ರಮುಖ ಜವಾಬ್ಧಾರಿಯಾಗಿತ್ತು.

 ಕೋವಿಡ್ -19 ವೈರಸ್ ನ ಪ್ರಮುಖ ಪ್ರತಿರೋಧ ಪ್ರವರ್ತನ ಎಂದರೆ ಅದು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು,ಯಾವುದೇ ಔಷಧಿ ಇಲ್ಲದ ಈ ವೈರಸ್ ನ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದಕ್ಕಾಗಿ ಮೊದಲಿಗೆ ಪಂಚಾಯತಿನ ಎಲ್ಲಾ ಧಾರ್ಮಿಕ ಸ್ಥಳಗಳಿಗೆ ಭೇಟಿಕೊಟ್ಟು ಯಾವುದೇ ಕಾರ್ಯಕ್ರಮಗಳಿಗೆ ಜನ ಸೇರಿಸದಂತೆ ಮನವರಿಕೆ ಮಾಡಲಾಯಿತು.ಈ ರೋಗದ ಬಗ್ಗೆ ಸಾಮಾನ್ಯ ಜನರಿಗೆ ತಿಳಿಸಲು ಮೈಕ್ ಪ್ರಚಾರ ಹಾಗೂ ಕರ ಪತ್ರಗಳನ್ನು ಹಂಚಲಾಯಿತು.ಕೇರಳ ಸರಕಾರದ ‘ಬ್ರೇಕ್ ದ ಚೈನ್ ‘ಕಾರ್ಯಕ್ರಮದ ಭಾಗವಾಗಿ ಪಂಚಾಯತಿನ ಸಾರ್ವಜನಿಕ ಸ್ಥಳಗಳಲ್ಲಿ ಕೈ ತೊಳೆಯುವ ವ್ಯವಸ್ಥೆ ,’ಸ್ಯಾನಿಟೈಸರ್’ ಮತ್ತು ‘ಹ್ಯಾಂಡ್ ವಾಶ್’ ಒದಗಿಸಲಾಯಿತು.

ಜನವರಿ ತಿಂಗಳಿನಿಂದಲೇ ಹೊರನಾಡಿನಿಂದ ನಮ್ಮ ಪಂಚಾಯತಿಗೆ ಬಂದ ಎಲ್ಲರನ್ನೂ ‘ಹೋಮ್ ಐಸೋಲೇಶನ್’ ಗೆ ಒಳಪಡಿಸಿ ನಿರೀಕ್ಷಿಸಲಾಯಿತು.ಪಂಚಾಯತು ಪ್ರದೇಶದ ಒಂದು ಶಾಲೆಯನ್ನು ‘ಕೇರ್ ಸೆಂಟರ್’ ಆಗಿ ಪರಿವರ್ತಿಸಲಾಯಿತು. ಪಂಚಾಯತಿನ ಸಾರ್ವಜನಿಕ ಸ್ಥಳಗಳಲ್ಲಿ ಇತರ ರಾಜ್ಯದ ಅಥಿತಿ ಕಾರ್ಮಿಕರು ವಾಸಿಸುವ ಸ್ಥಳಗಳಲ್ಲಿ ಶುಚೀಕರಣ ಕಾರ್ಯವನ್ನು ಕೈಗೊಳ್ಳಲಾಯಿತು.(ಇತರ ರಾಜ್ಯದ ಕಾರ್ಮಿಕರನ್ನು ಅಥಿತಿಗಳು ಎಂದು ಕರೆಯುವುದು ಕೇರಳದ ದೊಡ್ಡ ಗುಣ).ಪಂಚಾಯತು ಪ್ರದೇಶದ ಬಡವರಿಗೆ ,

ಅನಾಥರಿಗೆ ಮತ್ತು ಇತರ ರಾಜ್ಯದ ಅಥಿತಿ ಕಾರ್ಮಿಕರಿಗೆ ಊಟದ ವ್ಯವಸ್ಥೆಯನ್ನು ಒದಗಿಸಲು ‘ಕಮ್ಯೂನಿಟಿ ಕಿಚನ್’ ಸ್ಥಾಪಿಸಲಾಯಿತು.ಈ ಕಿಚನ್ ನಿಂದ ಸುಮಾರು 250ರಷ್ಟು ಊಟಗಳನ್ನು ಪ್ರತಿ ದಿನ ಸ್ವಯಂ ಸೇವಕರ ಸಹಾಯದಿಂದ ಅರ್ಹ ವ್ಯಕ್ತಿಗಳಿಗೆ ಉಚಿತವಾಗಿ ಒದಗಿಸಲಾಯಿತು.


 ಪ್ರಧಾನ ಮಂತ್ರಿಯವರ ಕರೆಗೆ ಸ್ಪಂದಿಸಿ ಮಾರ್ಚ್ 22ರ “ಜನತಾ ಕರ್ಪ್ಯೂ ”ಜನರೇ ಯಶಸ್ವಿಯಾಗುವಂತೆ ಮಾಡಿ ,ಇದು ಮುಂದಕ್ಕೆ ಮೇ ತಿಂಗಳ 3ರ ವರೆಗೆ ಲಾಕ್ ಡೌನ್ ಗೆ ನಾಂದಿಯಾಯಿತು.ಇತಿಹಾಸದಲ್ಲಿ ಇದುವರೆಗೆ ಕೇಳದ, ಅನುಭವಿಸದ,ಒಂದು ತಿಂಗಳಿಗಿಂತಲೂ ಹೆಚ್ಚು ದೀರ್ಘಕಾಲದ ಗೃಹ ಬಂಧನಕ್ಕೆ ಜನಗಳು ಸ್ವತ: ಒಳಗಾದರು.

ಈ ಲಾಕ್ ಡೌನ್ ಕಾಲದಲ್ಲಿ ಕೆಲವೊಂದು ತಮಾಷೆಯ ಕ್ಷಣಗಳಿದ್ದವು.ಸಾಧಾರಣ ಜನರಿಗೆ ‘ಕೊರೋನಾ’,’ಲಾಕ್ ಡೌನ್’,’ಕ್ವಾರಂಟೈನ್’ ಮುಂತಾದ ಶಬ್ದಗಳು ಹೊಸದಾಗಿತ್ತು ಇದರಿಂದಾಗಿ ಕೆಲವರ ಬಾಯಲ್ಲಿ ‘ಲಾಕ್ ಡೌನ್’ ಎಂಬುದು ‘ಡೌನ್ ಲೋಡ್’ ಆಗುತ್ತಿತ್ತು ‘ಕ್ವಾರಂಟೈನ್’ ಬದಲು ‘ಕ್ಯಾಂಟೀನ್’ ಮತ್ತು ‘ಕೊರೋನಾದ’ ಬದಲು ‘ಕರೋನಾ’ ಎಂದು ಉಚ್ಚರಿಸುತ್ತಿದ್ದರು.

ಈ ಲಾಕ್ ಡೌನ್ ಕಾಲದಲ್ಲಿ ಎರಡು ರೀತಿಯ ಜನರನ್ನು ಹೆಚ್ಚಾಗಿ ಕಂಡುಬರುತ್ತಿದ್ದರು. ಒಂದು ಗಡ್ಡ ಬಿಟ್ಟು ಕೂದಲು ಬಿಟ್ಟವರು! ಮತ್ತೊಂದು ವಿಭಾಗ ಸಲೂನ್ ಇಲ್ಲದೆ ತಾವೆ ಕ್ಷೌರ ಮಾಡಿದ ಬೋಳು ತಲೆಯವರು!,ಇಂತಹ ಹಲವು ತಮಾಷೆಗಳು ಈ ಸಮಯದಲ್ಲಿ ಅನುಭವಕ್ಕೆ ಬರುತ್ತಿತ್ತು.ಇನ್ನು ಇತರ ರಾಜ್ಯದ ಕಾರ್ಮಿಕರ ಯೋಗ ಕ್ಷೇಮ ನೋಡಬೇಕಾದುದು ನಮ್ಮ ಜವಾಬ್ದಾರಿಯಾಗಿತ್ತು.ಇಲ್ಲಿ ಭಾಷಾ ಪ್ರಶ್ನೆ ನಮ್ಮನ್ನು ಕಾಡುತ್ತಿತ್ತು.ಇಲ್ಲಿ ಕಾಲೇಜಿನ ದಿನಗಳಲ್ಲಿ ಕಂಡ ಹಿಂದಿ ಸಿನೆಮಾಗಳು ಪ್ರಯೋಜನಕ್ಕೆ ಬರುತ್ತಿತ್ತು,ಅದರ ಕೆಲವೊಂದು ಡೈಲಾಗುಗಳನ್ನು ನೆನಪು ಮಾಡಿ ಅವರಲ್ಲಿ ವ್ಯವಹರಿಸುತ್ತಿದ್ದೆವು,ಅವುಗಳಲ್ಲಿ ಕೆಲವೊಂದು ಡೈಲಾಗುಗಳು ಅವರಿಗೂ ಅರ್ಥವಾಗದೆ ,ನನಗೂ ಅರ್ಥವಾಗದೆ ಕೊನೆಗೆ ಕೈ ಭಾಷೆಯಲ್ಲಿ ವ್ಯವಹಾರ ನಡೆಯುತ್ತಿತ್ತು.

ಈ ಲಾಕ್ ಡೌನ್ ಸಮಯದಲ್ಲಿ ಎಲ್ಲರೂ ಮಾಸ್ಕ್ ಧರಿಸಿಯೇ ಹೊರಗೆ ಬರುತ್ತಿದ್ದರು ಕೆಲವರು ಸರಿಯಾದ ರೀತಿಯಲ್ಲಿ ಮಾಸ್ಕ್ ಧರಿಸದೆ ಇನ್ನು ಕೆಲವರು ಕೈಗೆ ಸಿಕ್ಕಿದ ಬಟ್ಟೆಗಳನ್ನು ಮುಖ,ತಲೆ ಪೂರ್ತಿ ಕಟ್ಟಿ ವಿಚಿತ್ರವಾಗಿ ಕಾಣುತ್ತಿದ್ದರು!.ಆತಂಕದ ಸಮಯದಲ್ಲಿ ಕೂಡ ಇಂತಹ ತಮಾಷೆ ಸನ್ನಿವೇಷಗಳು ಅನುಭವಕ್ಕೆ ಬರುತ್ತಿತ್ತು.

ವಿಶ್ವದ ಆರ್ಥಿಕತೆ ನೆಲ ಮುಟ್ಟಿದರೂ,ಪ್ರಕೃತಿ ಮಾತ್ರ ಮಾನವ ಅತಿಕ್ರಮ ಇಲ್ಲದೆ ಪರಿಶುದ್ದವಾದುದು ಈ ಲಾಕ್ ಡೌನ್ ಕಾಲದ ವಿಪರ್ಯಾಸ!. ಕೋವಿಡ್ -19 ಎಂಬ ವೈರಸ್ ‘ರಕ್ತ ಬಿಜಾಸುರನ’ರೀತಿಯಲ್ಲಿ ದಿನದಿಂದ ದಿನಕ್ಕೆ ವೃದ್ದಿಸುತ್ತಾ ನಮ್ಮ ಜಿಲ್ಲೆಯಲ್ಲಿ ಮಾರ್ಚು ಕೊನೆಯಲ್ಲಿ ಸೋಂಕಿತರ ಸಂಖ್ಯೆ 100ಕ್ಕೆ ತಲುಪಿತ್ತು.ದೈನಂದಿನ ಆಫೀಸಿನ ಕಾರ್ಯದ ಭಾಗವಾಗಿ ಹಲವು ಜನರನ್ನು ಸಂಪರ್ಕಿಸುವ ನಮಗೆ ನಮ್ಮ ಮನೆಯಲ್ಲಿರುವ ವೃದ್ಧ ತಾಯಿ ಮತ್ತು ಚಿಕ್ಕ ಮಕ್ಕಳ ಬಗ್ಗೆ ಆತಂಕ ಇದ್ದೇ ಇತ್ತು.ಆದರೆ ನಮ್ಮ ಮೇಲಾಧಿಕಾರಿಯಾದ ಪಂಚಾಯತು ಉಪ ನಿರ್ದೇಶಕರಾದ ಶ್ರೀ ರಿಜು ಕುಮಾರ್ ರವರ ಪ್ರೋತ್ಸಾಹದ ಮಾತು ನಮ್ಮನ್ನು ಆತಂಕದಿಂದ ಹೊರತಂದು ನಮ್ಮ ನಾಡಿನ ಜನರ ಸೇವೆಗೆ ನೆರವಾಗಲು ಸಹಕಾರಿಯಾಗುತ್ತಿತ್ತು.

 ನಮ್ಮ ಸರಕಾರದ ಧೀರನಡೆ ,ನಮ್ಮ ಪಂಚಾಯತಿನ ಜನರ ಅತ್ಯುತ್ತಮ ಸಹಕಾರ ,ನಮ್ಮ ಪಂಚಾಯತು ಅಧ್ಯಕ್ಷರು,ಉಪಾಧ್ಯಕ್ಷರು,ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರುಗಳ ನೇತೃತ್ವ,ನಮ್ಮ ಪಂಚಾಯತು ಇಲಾಖೆ ಹಾಗೂ ಆರೋಗ್ಯ ಇಲಾಖೆಯ ನೌಕರರ ಅವಿತರ ಶ್ರಮ ,ಕುಟುಂಬಶ್ರೀ,ಯುವ ಜನ ಸಂಘಗಳ ಸದಸ್ಯರು,ರಾಜಕೀಯ ಧಾರ್ಮಿಕ ನೇತಾರರ ಪರಿಶ್ರಮದಿಂದ ಇದುವರೆಗೆ ನಮ್ಮ ಪಂಚಾಯತಿನಲ್ಲಿ ಒಂದೇ ಒಂದು ಕೋವಿಡ್ – 19 ವೈರಸ್ ನ ಸೋಂಕು ಕಂಡು ಬಂದಿಲ್ಲ.ಇನ್ನು ಮುಂದೆ ಕೂಡಾ ಯಾರಿಗೂ ಸೋಂಕು ಬಾರದಿರಲಿ ಎಂದು ಪ್ರಾರ್ಥಿಸುತ್ತೇನೆ.

ವಿದೇಶದಿಂದ ನಮ್ಮ ಸಹೋದರರು ಹಿಂತಿರುಗಿ ಬರುತ್ತಿರುವ ಸುದ್ದಿ ಬರುತ್ತಾ ಇದೆ.ಅವರಿಗಾಗಿ ಕ್ವಾರಂಟೈನ್ ಕೇರ್ ಸೆಂಟರ್ ಸಜ್ಜೀಕರಿಸಲಾಗಿದೆ.ಅವರನ್ನು ಸ್ವೀಕರಿಸಲು ಕಾಯುತ್ತಿದ್ದೇವೆ. ಈಗ ಲಾಕ್ ಡೌನನ್ನು 17/5/2020 ಕ್ಕೆ ಮುಂದುವರಿಸಲಾಗಿದೆ.ಏನೇ ಆದರೂ ನಮ್ಮ ರಾಜ್ಯದಲ್ಲಿ ಕೋವಿಡ್ – 19 ವೈರಸಿನ ಸಂಪೂರ್ಣ ನಾಶ ಆಗುವ ವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ.

 K.Harish
 Secretary
 Puthige Grama Panchayath

33 comments:

  1. കന്നഡ ഭാഷയിലെ നീണ്ട വിശദമായ കുറിപ്പ് തയ്യാറാക്കിയ harishinu അഭിനന്ദനങ്ങൾ

    ReplyDelete
  2. Very nice work... Well done. Keep it up

    ReplyDelete
  3. Waw superb... you have done an wonderful work...

    ReplyDelete
  4. Nice work enchana good work manpula god bless you and ur family.

    ReplyDelete
  5. Thumbaa olleya kelasa..thaavu eee horaatadalli sallisida seve ..bhagavanthanige priyavaadaddu.Devaru thammannu sadaaa ..chennaagittirali.

    ReplyDelete
  6. ಕೇರಳದಲ್ಲಿ ಕೊರೊನವನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ... ಎಲ್ಲರಿಗೂ ಅಭಿನಂದನೆಗಳು.....

    ReplyDelete
  7. ಕೇರಳದಲ್ಲಿ ಕೊರೊನವನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ... ಎಲ್ಲರಿಗೂ ಅಭಿನಂದನೆಗಳು.....

    ReplyDelete
  8. Good effort sir.......your Commitment really appreciable

    ReplyDelete
  9. Good work sir.. it helped to more people... Superb

    ReplyDelete
  10. Commendable achievement, sir

    ReplyDelete
  11. Good job Sir!!. ಈ ಹೋರಾಟದಲ್ಲಿ ಯಶಸ್ಸು ನಿಮ್ಮದಾಗಲಿ. ವೈರಸ್ ಮುಕ್ತ ಕೇರಳದ ನಿಮ್ಮ ಹೋರಾಟಕ್ಕೆ ಅಭಿನಂದನೆಗಳು..

    ReplyDelete
  12. Mask, Sanitiser maathra ayudhavagi balasikondu Korona virudda horatada Puthige Panchayath Sainyada Commander Harish Dharmanagara nim Horaata vyarthvagalla...... ee waar naav gedde geltheve.....

    ReplyDelete